No Of Views :   Hit Web Stats
Ads


Don't Blink

ಮಾಸ್ಕೊ: ಪುಟಿನ್ ಗೆ ಭರ್ಜರಿ ಜಯ, ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ.   ನವದೆಹಲಿ: ಕೇಂದ್ರದ ವಿರುದ್ಧ ಟಿಡಿಪಿಯಿಂದ ಇಂದು ಅವಿಶ್ವಾಸ ಮಂಡನೆ.  ಅಮೃತಸರ: ಮನಮೋಹನ್ ಸಿಂಗ್ ಮೌನ ಸಾಧಿಸಿದ್ದನ್ನು ಬಿಜೆಪಿಯ ಅಬ್ಬರ ಸಾಧಿಸಲಾಗಲಿಲ್ಲ : ನವಜೋತ್ ಸಿಂಗ್ ಸಿಧು.     ಕೊಪ್ಪಳ: ಸರ್ಕಾರ ಬಯಸಿದರೇ 9 ದಿನಗಳಲ್ಲೇ ಅಧಿಕಾರಿಗಳ ವರ್ಗಾವಣೆಯಾಗುತ್ತದೆ: ಬಸವರಾಜರಾಯರೆಡ್ಡಿ.  ಚಿಕ್ಕಮಗಳೂರು: ಮಳೆ ಅವಾಂತರ: ಸೇತುವೆ ಕುಸಿತ, ವಿದ್ಯುತ್ ಸಂಪರ್ಕ ಕಡಿತ.    ಮಂಗಳೂರು: ಸ್ವಾಮೀಜಿಗೆ ಅವಮಾನ, ಶಾಸಕ ಜೈನ್ ವಿರುದ್ಧ ಸೋಮವಾರ ಬೃಹತ್ ಪ್ರತಿಭಟನೆ.  ಶ್ರೀನಗರ: ಜಿಹಾದ್ ಬೋಧನೆ ನಿಲ್ಲಿಸಿ, ಉತ್ತಮ ಮಾರ್ಗ ತೋರಿಸಿ; ಮೌಲ್ವಿಗಳಿಗೆ ಸಿಎಂ ಮೆಹಬೂಬಾ ಮುಫ್ತಿ.   ಬೆಂಗಳೂರು: ಆಧಾರ್ ಪಡೆದುಕೊಳ್ಳಲು ಬೆಂಗಳೂರಿನಲ್ಲಿ ಮಧ್ಯವರ್ತಿಗಳ ಹಾವಳಿ.   ನವದೆಹಲಿ: ನೀರವ್ ಮೋದಿ ಆಸ್ತಿಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ.   ಬೆಂಗಳೂರು: ಇಂದು ನಿರ್ಧಾರವಾಗಲಿದೆ ಜೆಡಿಎಸ್ ಬಂಡಾಯ ಶಾಸಕರ ಭವಿಷ್ಯ.  ಕಾರವಾರ: ಕಾಂಗ್ರೆಸ್ ವಾಟ್ಸಾಪ್ ಗ್ರೂಪ್'ನಲ್ಲಿ ತನ್ನದೇ ಅಶ್ಲೀಲ ಚಿತ್ರ ಹಾಕಿದ ಮುಖಂಡ. ಕೊಲಂಬೊ: ಟಿ -20 ಫೈನಲ್: ಲಾಸ್ಟ್ ಬಾಲ್ ಸಿಕ್ಸ್ -ಭಾರತಕ್ಕೆ ಯುಗಾದಿ ಗಿಫ್ಟ್. ಬಳ್ಳಾರಿ: ರಸ್ತೆಯಲ್ಲೇ ಹೊತ್ತಿ ಉರಿದ ಕೆಎಸ್ ಆರ್ ಟಿಸಿ ಬಸ್.  ಮೀರಠ್: ಮಾಲಿನ್ಯ ತಡೆ ಹೆಸರಲ್ಲಿ ಮಾವಿನ ಮರ ಉರಿಸುವ ಯಜ್ಞ!  ಕೊಪ್ಪಳ: ಸಿಎಂ ಕೊಪ್ಪಳ ಭೇಟಿ: ಬಿಜೆಪಿ ಮುಖಂಡರ ಬಂಧನ.   ಹುಬ್ಬಳ್ಳಿ:  ಮತ್ತೊಬ್ಬ ಕಾಂಗ್ರೆಸ್ ನಾಯಕನ ಮಗನ ದುಂಡಾವರ್ತನೆ.   ಬೇಲೂರು: ಮಸೀದಿಗಳು ಜನಾಂಗದ ಅಭಿವೃದ್ಧಿ ಕೇಂದ್ರವಾಗಬೇಕು: ಸಚಿವ ತನ್ವೀರ್ ಸೇಠ್.  ಪಾಟ್ನಾ: ಅಲ್ಪಸಂಖ್ಯಾತರ ಕಡೆಗೂ ಬಿಜೆಪಿ ಗಮನ ಹರಿಸಬೇಕು: ರಾಮ್ ವಿಲಾಸ್ ಪಾಸ್ವಾನ್.  ರಾಂಚಿ: ಇಂದು ಲಾಲೂ ಮೇವು ಹಗರಣದ ನಾಲ್ಕನೇ ಪ್ರಕರಣದ ತೀರ್ಪು.

',N'

ಲಕ್ನೋ, ಮಾರ್ಚ್ 19: ಶಿವಸೇನೆ, ಟಿಡಿಪಿ ಸಾಲಿಗೆ ಹೊಸ ಪಕ್ಷವೊಂದು ಸೇರ್ಪಡೆಯಾಗಿದೆ. ಎನ್.ಡಿ.ಎ ಮಿತ್ರ ಪಕ್ಷವಾಗಿರುವ ಉತ್ತರ ಪ್ರದೇಶದ ಸುಹೆಲ್ದೇವ್ ಭಾರತೀಯ ಸಮಾಜ್ ಪಾರ್ಟಿ (ಎಸ್.ಬಿ.ಎಸ್.ಪಿ) ಬಿಜೆಪಿ ನಡವಳಿಕೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿರುವ ಎಸ್.ಬಿ.ಎಸ್.ಪಿ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಸಚಿವ ಒ.ಪಿ ರಾಜಭಾರ್, 'ಉತ್ತರ ಪ್ರದೇಶ ಸರಕಾರ ಕೇವಲ ದೇವಸ್ಥಾನಗಳ ಬಗ್ಗೆ ಗಮನಹರಿಸುತ್ತಿದೆ. ಬಡ ಜನರ ಕಲ್ಯಾಣದ ಬಗ್ಗೆ ಯೋಚಿಸುತ್ತಿಲ್ಲ. ಇದೇ ಬಡವರು ಅಧಿಕಾರಕ್ಕೇರಲು ಮತಚಲಾಯಿಸಿದ್ದರು. ಈ ಬಗ್ಗೆ ತುಂಬಾ ಮಾತನಾಡಲಾಗುತ್ತದೆ. ಆದರೆ ತಳಮಟ್ಟದಲ್ಲಿ ಏನೂ ಬದಲಾವಣೆಯಾಗುತ್ತಿಲ್ಲ,' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು, ಮಾ19-ಕೆಲವು ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗಿರುವ ಬಿಜೆಪಿ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಹಾಲಿ ಇಬ್ಬರೂ ಶಾಸಕರಿಗೆ ಟಿಕೆಟ್ ನೀಡದೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಆಲೋಚಿಸಿದೆ. ಮಡಿಕೇರಿಯ ಶಾಸಕ ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ನೀಡಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಆತಂಕವನ್ನು ಆರ್ಎಸ್ಎಸ್ ವರಿಷ್ಠರು ವ್ಯಕ್ತಪಡಿಸಿದ್ದಾರೆ.  ಮುಂಬಯಿ, ಮಾರ್ಚ್ 19 : ಜಾಗತಿಕ ಶೇರು ಪೇಟೆಗಳಲ್ಲಿನ ದೌರ್ಬಲ್ಯ ಮತ್ತು ಭಾರತದ ಚಾಲ್ತಿ ಖಾತೆ ಕೊರತೆ ಜಿಡಿಪಿಯ ಶೇ.2ರಷ್ಟು ಏರಿ 13.5 ಶತಕೋಟಿ ಡಾಲರ್ ಮಟ್ಟಕ್ಕೆ ಬೆಳೆದಿರುವ ಕಳವಳಕಾರಿ ವಿದ್ಯಮಾನದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 10.30ರ ಹೊತ್ತಿಗೆ 69.44 ಅಂಕಗಳ ನಷ್ಟಕ್ಕೆ ಗುರಿಯಾಗಿ 33,106.56 ಅಂಕಗಳ ಮಟ್ಟಕ್ಕೆ ಕುಸಿಯಿತು.    ಬೆಂಗಳೂರು, ಮಾರ್ಚ್ 19: ಕರ್ನಾಟಕದಲ್ಲಿ ಪೊಲೀಸರ ಮೇಲೆ ಗೂಂಡಾಗಳ ಹಲ್ಲೆ ಮುಂದುವರಿದಿದೆ. ಇಂದು ಪೊಲೀಸ್ ಕಾನ್ ಸ್ಟೇಬಲ್ ಒಬ್ಬರ ಮೇಲೆ ಬೆಂಗಳೂರಿನಲ್ಲಿ ಹಾಡಹಗಲೇ ದಾಳಿ ನಡೆದಿದ್ದು, ಪೊಲೀಸರ ನೈತಿಕ ಸ್ಥೈರ್ಯವನ್ನೇ ಇದು ಕುಗ್ಗಿಸಿದೆ. ನಗರದ ಮಾರತಹಳ್ಳಿ ಸಮೀಪ, ವರ್ತೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗೂಂಡಾಗಳು ಸಿದ್ದಾಪುರ ಕ್ರಾಸ್ ನಲ್ಲಿ ಪೊಲೀಸ್ ಪೇದೆ ಮೇಲೆ ಕೈ ಮಾಡಿದ್ದು, ಸಾರ್ವಜನಿಕರ ಮುಂದೆಯೇ ಅಟ್ಟಾಡಿಸಿ ಹೊಡೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಕೊಲಂಬೊ, ಮಾ.19: ಇಲ್ಲಿನ ಪ್ರೇಮ್ ದಾಸ್ ಕ್ರೀಡಾಂಗಣದಲ್ಲಿ ರವಿವಾರ ರಾತ್ರಿ ನಡೆದ ನಿದಾಸ್ ಟ್ರೋಫಿ ಟ್ವೆಂಟಿ-20 ತ್ರಿಕೋನ ಸರಣಿಯ ಫೈನಲ್ನಲ್ಲಿ ಬಾಂಗ್ಲಾ ವಿರುದ್ಧ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದು ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಸರಣಿ ಜಯಿಸಿರುವುದಕ್ಕೆ ಭಾರತದ ಮಾಜಿ ನಾಯಕರುಗಳಾದ ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಅಭಿನಂದಿಸಿದ್ದಾರೆ. ಗೆಲುವಿನ ರೂವಾರಿ ದಿನೇಶ್ ಕಾರ್ತಿಕ್ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ.    ಲಕ್ನೋ,ಮಾ.19: ನಗರದ ಹೊರವಲಯದ ಮಾಳ್ ಎಂಬ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೃತದೇಹ ಮರದಲ್ಲಿ ನೇತಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮಡಿಯಾನ್ನಲ್ಲಿ ಖಾಸಗಿ ಶಾಲೆಗೆ ಹೋಗುತ್ತಿದ್ದ ಬಾಲಕಿ ಮಾರ್ಚ್ 15ರಂದು ಶಾಲೆಗೆ ಹೋದವಳು ವಾಪಸ್ಸಾಗಿರಲಿಲ್ಲ. ಆ ದಿನ ರಾತ್ರಿ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿ ನೆರೆಮನೆಯ ವ್ಯಕ್ತಿ ಹಾಗೂ ಆತನ ಪತ್ನಿ ಸೇರಿ ಮಗುವನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿದ್ದರು. ಇದೀಗ ಮಾಳ್ ಗ್ರಾಮದ ಕೊಲ್ವಾ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇತುಹಾಕಿರುವುದು ಪತ್ತೆಯಾಗಿದೆ. ಈ ಜಾಗ ನೆರೆಮನೆಯ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.     ಕಲಬುರಗಿ, ಮಾ.19: ಯುಗಾದಿಯ ಸಂಭ್ರಮದ ಮಧ್ಯ ದುರಂತವೊಂದಕ್ಕೆ ಸಾಕ್ಷಿಯಾಗಿರುವ ಘಟನೆ ಶಹಬಾದ್ ತಾಲೂಕು ದೇವನ ತೇಗನೂರು ಹಬ್ಬದ ದಿನದಂದು ನಡೆದಿದೆ. ಭಾನುವಾರ ಇಲ್ಲಿನ ಶಿವಲಿಂಗೇಶ್ವರ ಜಾತ್ರಾ ಮಹೋತ್ಸಉತ್ಸವದಲ್ಲಿ ರಥ ಎಳೆಯುತ್ತಿರುವಾಗ ಕಿಶನ್ ಎಂಬುವರು ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದ್ದಾರೆ. ಮುಂದೆ ಬರುತ್ತಿದ್ದ ರಥದ ಗಾಲಿಗಳು ಈತನ ಮೇಲೆ ಹರಿದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಸಿನಿಮಾಡೆಸ್ಕ್, ಮಾ.19: ಸ್ಯಾಂಡಲ್ವುಡ್ನ ತಾರಾ ಜೋಡಿಗಳಲ್ಲಿ ಸುದೀಪ್-ಪ್ರಿಯಾ ಮೋಸ್ಟ್ ಕ್ವೀಟ್ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಕೆಲ ವಿಚಾರಕ್ಕೆ ವೈಮನಸ್ಸು ಉಂಟಾಗಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರೆ ಈಗ ಎಲ್ಲವೂ ಸರಿ ಹೋಗ, ಹಿಂದಿನ ಕಹಿ ಘಟನೆಯನ್ನು ಇಬ್ಬರು ಮರೆತು ಸುದೀಪ್-ಪ್ರಿಯಾ ಈಗ ಮತ್ತೆ ಒಂದಾಗಿದ್ದಾರೆ ಇದೀಗ ಪತ್ನಿ ಪ್ರಿಯಾರು ಯುಗಾದಿ ಹಬ್ಬದ ನಿಮಿತ್ತ ತಮ್ಮ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ್ದಾರೆ.   ಕೋಲಾರ, ಮಾ.19 : ಆರೋಗ್ಯ ಸಚಿವ ರಮೇಶ್ ಕುಮಾರ್ ತವರು ಕ್ಷೇತ್ರದಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಕೋಲಾರದ ತೊಟ್ಲಿ ಗ್ರಾಮದ ರೈತರ ಜಮೀನುಗಳಲ್ಲಿ ಸತ್ತ ಕೋಳಿಗಳ ರಾಶಿಯೇ ಬಿದ್ದಿದೆ. 5 ಸಾವಿರಕ್ಕೂ ಹೆಚ್ಚು ಸತ್ತ ಕೋಳಿಗಳನ್ನು ಪೌಲ್ಟ್ರಿ ಫಾರ್ಮ್ ಮಾಲೀಕರು ತಂದು ಜಮೀನಿನಲ್ಲಿ ಸುರಿದಿದ್ದಾರೆ. ಈ ಸಂಬಂಧ ಸತ್ತ ಕೋಳಿಗಳನ್ನು ತಂದು ಸುರಿದ ಪ್ರೌಲ್ಟಿ ಫಾರ್ಮ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.